Shree Kabbalamma Temple

DEVIYA DESCRIPTION

Priests at the temple worship everyday by describing goddess Sree kabbalamma's humility with these words..

ಪರಬ್ರಹ್ಮ ಸ್ವರೂಪಳಾದ ಮಾತೇ ! ಮುಂಡ ಮಾಲಿನೀ ! ಬ್ರಾಹ್ಮೀ ! ವೈಷ್ಣವೀ !
ಚಂಡೀ ! ಉಮೇ ! ಹೇಮಾವತೀ ! ಈಶ್ವರೀ ! ದಂಡಾವನ್ನು ಧರಿಸಿರುವಳೇ !
ಗೌರವರ್ನದ ದೇವಿ ! ದುರ್ಗೇ ! ಆನಂದೇ ! ಮಹಾದಿರ್ಗಿಯೇ !
ಖಡ್ಗಧಾರಿಣೀ ! ಚಕ್ರ, ಶೂಲ, ಮಸುಡಿ, ಮದ್ಗರ, ಹಲಿಗೆ, ಮಹಾ
ಕೋದಂಡಗಳನ್ನು ಧರಿಸಿರುವ ಭಯಂಕರ ಸ್ವರೂಪಿಣೀ ! ನಾರಾಯಣಿ ! ಕಬ್ಬಾಳು
ಆಳ್ವಿಣಿಯೇ ! ನಿನಗಿದೋ ನಮಸ್ಕರಿಸುತ್ತಿದ್ದೇನೆ.

ಎಲೈ ಭದ್ರಕಾಳೀ ! ಭವಾನ್ ! ಪಾರ್ವಅತೀ ! ಭದ್ರಮಂಗಳೇ ! ಅನ್ನಪೂರ್ಣೇ !
ರೌದ್ರೇ ! ಶಾಖಾಂಬರೀ ! ಮಹೇಶ್ವರಿ ! ಅಂಬೆ ! ಜಗದಾಂಬೆ ! ಕ್ಷುದ್ರರನ್ನು
ಸಂಹರಿಸುವವಳೇ ! ಷೋಡಶೀ ! ಸುಖನಿದ್ರೆ ! ಭುವನೇಶ್ವರೀ !
ಜಗನ್ಮಾಯಮುದ್ರೇ ! ಖೇಚರೀ ! ನಾರಾಯಣೀ ! ಕಬ್ಬಾಳು ಆಳ್ವಿಣಿಯೇ !
ನಿನಗಿದೋ ನಮಸ್ಕರಿಸುತ್ತಿದ್ದೇನೆ.

ದೇವಿ ! ನೀನು ಪ್ರೇತನಾಶಣೀ ! ಸರ್ಪಭೂಷಣೇ ! ಪ್ರಾರ್ಥಿಸಿದವರಿಗೆ
ಸರ್ವಸ್ವವನ್ನು ನೀಡುವ ಧಾತೇ ! ಗಿರಿರಾಜಸುತೇ ! ನಿತ್ಯಳೇ ! ಸರ್ವ ಭೂತಗಳ
ನಾಥೆ ! ಭಯಂಕರೀ, ಶಂಕರೀ ನೀನು ಶಾಂತಸ್ವರೂಪಿಣಿಯೂ ಹೌದು ಪ್ರೀತೇ !
ಪುಣ್ಯೇ ! ತ್ರಿನೇತ್ರೇ ! ಈಶ್ವರೀ ! ಮಾತೇ ! ಭೂತ ಗಣಾಯೇ ! ಧಾತ್ರಿಯೇ !
ಪೀತವಸ್ತ್ರಧರಿಸಿರುವ ಪೀತಾಂಬರಿಯೇ ! ನಾರಾಯಿಣೀ ! ಕಬ್ಬಾಳು ಆಳ್ವಿಣಿಯೇ !
ನಿನಗಿದೋ ನಮಸ್ಕರಿಸುತ್ತಿದ್ದೇನೆ.

ಸಿದ್ದಳೇ ! ಖಚರೀ ! ದೈತ್ಯ ಶಮನೀ ! ಶುದ್ದ ಚೈತನ್ಯ ! ವಿಧಾತ್ರೇ ! ರುದ್ರ
ಯಾಮಳೇ ! ರೌದ್ರಮುಖ ! ರಕ್ತಾಕ್ಷಿ ! ವಿಮಲಾಕ್ಷಿ ! ಬುದ್ದೀ ! ಸಾಕ್ಷಿ ! ಶಾಂತೆ !
ಶಾಂಭವೀ ! ಮುಗ್ದೇ ! ಮೂಢೇ ! ವಿವೇಕೇ ! ಅತ್ಯಂತ ಶಕ್ತಿಶಾಲಿನಿ ! ಪದ್ಮಾಸನೆ !
ನಾರಾಯಣೀ ! ಕಬ್ಬಾಳು ಆಳ್ವಿಣಿಯೇ ! ನಿನಗಿದೋ ನಮಸ್ಕರಿಸುತ್ತಿದ್ದೇನೆ.

ಕೋಮಲಾಂಗೀ ! ಸಹಸ್ರ ಕಣ್ಣುಗಳುಳ್ಳವಳೇ ! ಸೋಮಶೇಖರೇ ! ಮುಕ್ತಕೇಶೀ !
ನಿರಾಮಯೇ ! ನಿರಾವರಣೇ ! ನಿಷ್ಠಳೇ ! ನಿಜೇ ! ನಿಜಾನಂತೇ ! ಕಾಮರೂಪಿಣೀ !
ಕಾಮುಕೀ ! ಕಲ್ಯಾಣಿ ! ಕರುಣೀ ! ಭೀಮೇ ! ಬೈರವೀ ! ನಾರಾಯಿಣೀ ! ಕಬ್ಬಾಳು
ಆಳ್ವಿನಿಯೇ ! ನಿನಗಿದೋ ನಮಸ್ಕರಿಸುತ್ತಿದ್ದೇನೆ.

ತಾಯಿ ! ನೀನು ಮೇನಕಾತ್ಮಜೆ ! ಪಾಪಭಕ್ಷಿಣಿ ! ಧ್ಯಾನ ರೂಪಳು ! ಕರಾಳವದನೇ !
ಮೌನೀ ! ಯೋಗಿನಿ ! ಮಹಾತಪಸ್ವೀ ! ಮಹಾಕಾಳೀ ! ಆಧಿಶಕ್ತೀ !
ಜ್ಞಾನರೂಪಿಣೀ ! ಸುಧಾರಸಮೂರ್ತಿ ! ಅಚ್ಚುತೇ ! ಸ್ವಾನುಭವವೇ ! ಭಸ್ಮಾಂಗೀ !
ಭಗವತೀ ! ನಾರಾಯಣೀ ! ಕಬ್ಬಾಳು ಆಳ್ವಿಣಿಯೇ ! ನಮಸ್ಕಾರ.

ಷರಾಂಬೆ ! ನೀನು ಪಾದುಕಾಯೇ ! ವೀಣಾವಿನೋದೆ ! ನಾರಾಯಣೀ !
ನೃಸಿಂಹೇ ! ಆನಾದಿ ಶಕ್ತಿ ! ಆನಂದದಾಯಿನೀ ! ನಾದಬಿಂದು ಕಳಾತೀತೆ ! ವಾದಿ
ಮುಖ ಭಂಜನೆಯೇ ! ಸ್ತಂಭಿನಿ ! ವಿದ್ಯಾದೇವತೆಯೇ ! ಆದಿ, ಮಧ್ಯೆ, ಅಂತ್ಯಗಳ
ಸರ್ವಶಕ್ತಿ ! ನೀನು ಅವ್ಯಯೆ ! ವಾದಕ್ಕೂ ಚರ್ಚೆಗೂ ನಿಲುಕದಂತಹ ಸಾಕ್ಷಾತ್
ನಾರಾಯಣೀ ! ಅಂಬಾ ನೀನು ತಂತ್ರ ವಿದ್ಯಾದೇವತೆ ! ವಿಕಟಾಂಗೀ !
ವಿಮರ್ಶಳು ! ಯಂತ್ರ ! ಅಂಬಾ ನೀನು ತಂತ್ರ ವಿದ್ಯಾದೇವತೆ ! ವಿಕಟಾಂಗೀ !
ವಿಮರ್ಶಳು ! ಯಂತ್ರ ರೂಪವಾಗಿರುವೆ ! ಮಹೋದರಿ ಪ್ರಣವ ಮಂತ್ರಾದಿಗಳನ್ನು
ಸರ್ವರಿಂದಲು ಸ್ವೀಕರಿಸುವವಳು ! ತಾಯೆ ! ನೀನು ಸರಸ್ವತಿ, ಗಾಯತ್ರಿ
ಮಂತ್ರಮಯಳಾದ ಮೂರ್ತಿ, ಜಟಾಧರೆ, ಮಂತ್ರೆ, ಮಂತ್ರಾಸನೆ, ಮಹಾತ್ಮೆ !
ಮಂತ್ರದೇವತೆ ! ಹೇ ನಾರಾಯಣೀ ! ಕಬ್ಬಾಳು ಆಳ್ವಿಣಿಯೇ !
ನಿನಗಿದೋ ನಮಸ್ಕರಿಸುತ್ತಿದ್ದೇನೆ.

ಮುಧುಕೈಟಭಹರಳೆ ! ಮಧು ಪೂರ್ಣವಾದ ಮಹಿಷಾಸುರನನ್ನು ಕೊಂದವಳೇ !
ಮಹಾಸುರರೊಂದಿಗೆ ವಿರತೆಯಿಂದ ಯುದ್ಧ ಮಾಡಿದವಳೇ ! ಶುಂಭ ನಿಶುಂಭರನ್ನು
ಕೊಂದವಳೇ ! ಗರ್ಭನಿ, ಖಡ್ಗ, ಕಠಾರಿ, ತೋಮರ, ಸುಧಾ ಪಾತ್ರಗಳನ್ನು ಧರಿಸಿದವಳೇ !
ಸುಶಾಂತೆ ! ಸುಂದರಿ ! ಜಗತ್ ವ್ಯಾಪ್ತಳೇ ! ಕಬ್ಬಾಳು ಆಳ್ವಿಣಿಯೇ !
ನಿನಗಿದೋ ನಮಸ್ಕರಿಸುತ್ತಿದ್ದೇನೆ.

ಇಂದ್ರಕ್ಷಿ ! ಆರ್ಯಳೇ ! ಶಿವೇ ! ಪದ್ಮಾವತಿ ಕ್ಷೇತ್ರಗಳ ಈಶ್ವರನ ಆನಂದ ರೂಪಿಣಿ !
ಸುನಂದೆ ! ಹ್ರೀಂಕಾರೀ ! ಶಂಕರಿ ! ಖಟ್ವಾಂಗಿ ! ಹರಿಶಕ್ತಿ ! ನಾರಾಯಣೀ !
ಕಬ್ಬಾಳು ಆಳ್ವಿಣೀ ! ನಮೋ, ನಮೋ, ತಾಯೇ !

ಭೀಮಾಯೇ ತ್ರಾಹಿ ! ನೃಸಿಂಹ ತ್ರಾಹಿ ! ಚಾಮುಂಡಿ ತ್ರಾಹಿ ! ಮಾಹೇಂದ್ರಿ ತ್ರಾಹಿ !
ಭ್ರಮರಿಯೆ ತ್ರಾಹಿ ! ರಕ್ತದಂತಿಕೆ, ಶಿವದೂತೆ, ಮಾ:ಏಶ್ವರಿ, ವಾರಾಹಿ, ಬ್ರಹ್ಮೈ,
ದೇವದೇವಿ, ವೈಷ್ಣಮಿ, ನಾರಾಯಣೀ ! ಕಬ್ಬಾಳು ಆಶ್ವಿಣೀ ! ತ್ರಾಹಿ ತ್ರಾಹಿ, ತ್ರಾಹಿ ಮಾತೆ !
ಎಂದು ಪ್ರಾರ್ಥಿಸುತ್ತಿದ್ದರು.