ಅರ್ಚನೆ ಮತ್ತು ಅರಕೆ
ಶ್ರೀ ಕಬ್ಬಾಳಮ್ಮ ದೇವಸ್ಥಾನವು ಕನಕಪುರದಲ್ಲಿ ಐತಿಹಾಸಿಕ ಪುಣ್ಯಸ್ಥಳವಾಗಿದೆ..
ಮೈಸೂರು ರಾಜಮನೆತನದವರಾದ ಚಾಮರಾಜ ಒಡೆಯರ್ ರವರನ್ನು ಇಲ್ಲಿ ಸೆರೆ ಇಟ್ಟಿದ್ದರಿಂದ ಈ ಕಬ್ಬಾಳು ಗ್ರಾಮಕ್ಕೆ ಬಹಳ ಶಕ್ತಿಯುತಳಾದ ಮೈಸೂರಿನ ತಾಯಿ ಚಾಮುಂಡೇಶ್ವರಿಯು ಮತ್ತೊಂದು ರೂಪವಾದ ಕಾಳಿಕಾಂಬೆಯು ಕಬ್ಬಾಳಮ್ಮನ ರೂಪದಲ್ಲಿ ಬಂದು ನೆಲೆಸಲು ಅವಕಾಶವಾಯಿತೆಂದು ಹಾಗೂ ಕಬ್ಬಾಳಮ್ಮನ ರೂಪದಲ್ಲಿ ಬಂದು ನೆಲೆಸಲು ಅವಕಾಶವಾಯಿತೆಂದು ಹಾಗೂ ಈ ಕಬ್ಬಾಳಮ್ಮ ತಾಯಿಯು ಈ ಭಾಗದ ಜನರ ಕಷ್ಟ ಸುಖಗಳಿಗೆ ಸ್ಪಂದನ ನೀಡುತ್ತಾ ಆಶೀರ್ವಾದ ಮಾಡುತ್ತಿರುವುದಾಗಿ ನಾವು ಭಾವಿಸುತ್ತಿದ್ದೇವೆ.
ಪವಿತ್ರ ಸಂಪ್ರದಾಯಗಳು
ಯಾವ ವರ್ಷ, ಕಬ್ಬಾಳು ಗ್ರಾಮಕ್ಕೆ ಮಳೆ ಬೆಳೆ ಬಾರದೆ ಹಾನಿಗೊಳಗಾದಾಗ ಗ್ರಾಮದವರು ಈ ಬಗ್ಗೆ ಹಿಂದೆ ಮಾಡುತ್ತಿದ್ದ ಕ್ರಮವೂ ಸಹ ವಿಶಿಷ್ಟವಾಗಿದೆ. ಆ ಮಳೆಯ ಅಭಾವ ವರ್ಷದಲ್ಲಿ ಕಬ್ಬಾಳು ಅಮ್ಮನವರು ಗ್ರಾಮವನ್ನು ಬಿಟ್ಟುಹೋಗುವುದರಿಂದ ಅವರಿಗೆ ಮಳೆ ಬೆಳೆ ಸರಿಯಾಗಿ ಆಗುತ್ತಿಲ್ಲವೆಂದು ತಿಳಿಯುತ್ತಿದ್ದರು. ಆದ್ದರಿಂದ ಕಬ್ಬಾಳ ಗ್ರಾಮದ ಕಬ್ಬಾಳಮ್ಮನನ್ನು ಹುಡುಕುವ ಪ್ರಯತ್ನದಲ್ಲಿ, ಹತ್ತಿರದಲ್ಲಿರುವ ಬಸವನ ಬೆಟ್ಟದ ಹೆಬ್ಬೆಟ್ಟು ರಾಯನೆಂದು ಹೆಸರಾದ ಆಂಜನೇಯನನ್ನು ಈ ಕಾರ್ಯಕ್ಕೆ ನೇಮಿಸಿ, ಅವನಿಂದ ಕಬ್ಬಾಳಮ್ಮನನ್ನು ಹುಡುಕಿ ಕರೆತರುವ ಪ್ರಯತ್ನ ಮಾಡುವ ಸಲುವಾಗಿ, ಆಂಜನೇಯನನ್ನು ಕೋರಿಕೊಳ್ಳಲು ಬಸವನ ಬೆಟ್ಟಕ್ಕೆ ತೆರಳುವುದು ಸಂಪ್ರಾದಾಯಕವಾಗಿದೆ. ಆದ್ದರಿಂದ ಯಾರನ್ನು ಹುಡುಕಿ ಕೊಡಬೇಕು ಎಂಬುದನ್ನು ಆಂಜನೇಯನಿಗೆ ತಿಳಿಸಲು ಕಬ್ಬಾಳು ಗ್ರಾಮದ ಕಬ್ಬಾಳಮ್ಮನ ಉತ್ಸವಮೂರ್ತಿಯನ್ನೇ ಬಸವನ ಬೆಟ್ಟದ ತೆಗೆದುಕೊಂಡು ಹೋಗುತ್ತಿದ್ದರು ( ಈಗ ಬಸವನ ಬೆಟ್ಟಕ್ಕೆ ಮೋಟಾರು ದಾಟಿ ಇರುವ ಹಾಗೆ ಹಿಂದೆ ಇರಲಿಲ್ಲ. ಆಗ ಕಬ್ಬಾಳ ಗ್ರಾಮದವರು ತಮ್ಮ ದನಕರುಗಳನ್ನು ಸಾತನೂರು ಹರಿಹರ, ನಂತರ ಬಸವನ ಬೆಟ್ಟಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು ಕಬ್ಬಾಳ ಗ್ರಾಮದವರು ತಮ್ಮ ದನಕರುಗಳನ್ನು ಹಾಗೂ ಕಬ್ಬಾಳಮ್ಮನ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಬಸವನ ಬೆಟ್ಟದ ತಪ್ಪಲಿನಲ್ಲಿರುವ ಹರಿಹರಕ್ಕೆ ಹೋಗಿ ಅಲ್ಲಿಯ ಗ್ರಾಮದ ಮಾರಮ್ಮನನ್ನು ಪೂಜೆ ಮಾಡಿ ನಂತರ ಬಸವನ ಬೆಟ್ಟವನ್ನು ಏರಿ ಅಲ್ಲಿ ಹೆಬ್ಬಟ್ಟುರಾಯನ ಬಳಿ ಕಬ್ಬಾಳಮ್ಮನ ಉತ್ಸವಮೂರ್ತಿಯನ್ನು ಬಿಜಯಮಾಡಿಸುತ್ತಿದ್ದರು. ಆದರೆ ಈಗ ಪ್ರಯಾಣ ಬೆಳೆಸಲು ಚೆನ್ನಾಗಿರುವ ದಾರಿ ಇರುವುದರಿಂದ ಕಬ್ಬಾಳು ಜನರು ಸಾತನೂರು ಗ್ರಾಮದ ಹರಿಹರ ಕಡೆಯಿಂದ ಹೋಗುವುದನ್ನು ಬಿಟ್ಟಿರುತ್ತಾರೆ..
ನಂತರ ಬಸವನ ಬೆಟ್ಟದ ಮೇಲಿನ ಹೆಬ್ಬೆಟ್ಟುರಾಯನನ್ನು ಪೂಜಿಸಿ, ಕಬ್ಬಾಳಮ್ಮನು ತಮ್ಮ ಗ್ರಾಮವನ್ನು ಬಿಟ್ಟಿ ಹೋಗಿರುತ್ತಾರೆ. ಅವರನ್ನು ಹುಡುಕಿ ತಮ್ಮ ಗ್ರಾಮಕ್ಕೆ ಕಳುಹಿಸಿಕೊಡುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಈ ಪ್ರಾರ್ಥನೆಯ ನಂತರ ಮತ್ತೆ ಹೆಬ್ಬೆಟ್ಟುರಾಯನ(ಆಂಜನೇಯನನ್ನು) ಪೂಜೆ ಮಾಡಿದಾಗ, ಹೆಬ್ಬೆಟ್ಟುರಾಯನು ಭಕ್ತರ ಅಪೇಕ್ಷೆಯಂತೆ ಕಬ್ಬಾಳಮ್ಮನನ್ನು ಹುಡುಕಿ ಅವರನ್ನು ಕರೆತರುತ್ತಾನೆ. ಹೀಗೆ ಕರೆತಂದ ಬಗ್ಗೆ ಕಬ್ಬಾಳಮ್ಮನು ಸಾಮಾನ್ಯವಾಗಿ ಹೆಬ್ಬೆಟ್ಟು ರಾಯನ ದೇವಸ್ಥಾನದ ಅರ್ಚಕನ ಮೈ ಮೇಲೆ ಅಥವಾ ಕಬ್ಬಾಳಮ್ಮನವರ ಪೂಜಾರಿಯ ಮೇಲೆ ಕಬ್ಬಾಳಮ್ಮನ ದೇವರು ಬಂದು ಅದು ತಾನು ಕಬ್ಬಾಳು ಗ್ರಾಮಕ್ಕೆ ಬರುವುದಿಲ್ಲ. ಅಲ್ಲಿ ತನಗೆ ಅರ್ಚನಾ ಪೂರ್ವಕವಾಗಿ ಪೂಜೆ ಸಲ್ಲಿಸುತ್ತಿಲ್ಲ ಎಂದು ಕಾರಣವನ್ನು ಪದೇ ಪದೇ ಹೇಳುತ್ತಿದ್ದರೂ ಹೇಳಿದರೂ ಕಬ್ಬಾಳು ಗ್ರಾಮಸ್ಥರು ಕೇಳದೆ ಕಬ್ಬಾಳು ಅಮ್ಮನನ್ನು ಗ್ರಾಮಕ್ಕೆ ಬರುವಂತೆ ಮತ್ತೆ ಮತ್ತೆ ಕೇಳಿಕೊಂಡು ಕರೆದುಕೊಂಡು ಬರುವುದು ಪದ್ದತಿಯಾಗಿದೆ. ಈಗಲೂ ಕಬ್ಬಾಳು ಗ್ರಾಮದ ಗ್ರಾಮಸ್ಥರು ಈ ಸಂಪ್ರದಾಯವನ್ನು ಅನುಸರಿಸುತ್ತಾರೆ.
ಹರಕೆ
ಈ ಕಾಳಿಕಾದೇವಿಯ ವಿಗ್ರಹವನ್ನು ದೇವಸ್ಥಾನದಲ್ಲಿ ಪ್ರತಿಷ್ಠೆ ಮಾಡಿದ ಅನೇಕ ವರ್ಷಗಳ ನಂತರ ಕೆಲವರು ಈ ಅಮ್ಮನವರಿಗೆ ವಾರದ ಕೆಲದಿನಗಳಾದ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರದಂದು ವಿಶೇಷ ಪೂಜೆ ಮಾಡತೊಡಗಿದರು. ಕಾಲಕ್ರಮೇಣ ದೇವಾಲಯದಲ್ಲಿ ಶಾಸ್ತ್ರ ಬದ್ದವಾಗಿ ಪೂಜಾ ಕಾರ್ಯಗಳನ್ನು ನಡೆಸಲು ತೊಂದರೆಯಾಗಿದ್ದರಿಂದ ಸಂಪ್ರದಾಯಸ್ಥ ಬ್ರಾಹ್ಮಣ ಅರ್ಚಕರಿಗೆ ಬಹಳ ಖೇಧ ಉಂಟಾಗಿ ತಮ್ಮ ಅರ್ಚಕ ವೃತ್ತಿ ಬಿಟ್ಟು ದೇವರ ಅರ್ಚನೆಯನ್ನು ಗ್ರಾಮದವರಿಗೆ ವಹಿಸಿಕೊಟ್ಟಿರಬಹುದು.
ದಿನೇ ದಿನೇ ಈ ಕಬ್ಬಾಳಮ್ಮನ ಶಕ್ತಿಯ ಲಾಭವನ್ನು ಪಡೆದ ಅನೇಕರು ಈ ದೇವತೆಯ ಭಕ್ತರಾದವರು ನಾನಾ ಕಥೆಗಳು ಹುಟ್ಟಿಕೊಂಡವು ಈ ದೇವತೆಯ ಶಕ್ತಿಪ್ರಸಾದಕ್ಕೆ ಮಾರುಹೋಗಿ ಈ ದೇವತೆಯ ಹೆಸರನ್ನು ಕಾಳಿಕಾಂಬೆ ಅಮ್ಮನವರು ಎಂದು ಕರೆಯದೆ ಗ್ರಾಮಾದೇವತೆಯಾಗಿ ಕಬ್ಬಾಳು ಅಮ್ಮ ಎಂದು ಕರೆಯತೊಡಗಿದರು. ಅಲ್ಲದೆ ಅನೇಕ ಹರಕೆಗಳನ್ನು ಹರಸಿಕೊಂಡರು ಆ ಹರಕೆಗಳನ್ನು ಭಕ್ತಿಪ್ರಧಾನವಾಗಿದ್ದರೆ ಈ ದಏವತೆಯ ಶಕ್ತಿಯಿಂದ ಬಹಳ ಬೇಗ ಹರಕೆಗಳನ್ನು ಭಕ್ತಿಪ್ರಧಾನವಾಗಿದ್ದರೆ ಈ ದೇವತೆಯ ಶಕ್ತಿಯಿಂದ ಬಹಳ ಬೇಗ ಅದು ಫಲಿಸುತ್ತಿತ್ತು. ಪೂರ್ಣ ಫಲ ಸಿಕ್ಕಿದ ನಂತರ ಹರಕೆಯನ್ನು ತಂದೊಪ್ಪಿಸುವ ಕಾರ್ಯ ಪ್ರಾರಂಭವಾಗಿಯು. ಈ ಬಗ್ಗೆ ಬಹಳ ಹಿಂದೆಯೇ ಅಂದರೆ ಕ್ರಿ.ಶ. 1950-60 ರ ದಶಕದಲ್ಲಿಯೇ ಈ ಕಾಳಿಕಾದೇವಿಯ/ ಕಬ್ಬಾಳಮ್ಮನ ವಿಗ್ರಹಕ್ಕೆ ಬೆಳ್ಳಿಯ ತಗಡಿನ ಆಭರಣಗಳನ್ನು ಮಾಡಿಸಿ ಕೊಟ್ಟಿರುವುದನ್ನು ಕನಕಪುರ ಶಾಸನ ಸಂಖ್ಯೆಗಳಾದ 129 ಮತ್ತು 130 ರಲ್ಲಿ ನೋಡಬಹುದಾಗಿದೆ. ಅಲ್ಲದೆ ಈ ದೇವರಿಗೆ ಬೆಳ್ಳಿಯ ಕಳಶವನ್ನು ಸಹ ನೀಡಲಾಗಿದೆಯೆಂದು ಕನಕಪುರದ ಶಾಸನ ಸಂಖ್ಯೆ 131 ರಲ್ಲಿ ಬರೆಯಲಾಗಿದೆ.
ಶಾಸನ 129
ಕಾಳಯುಕ್ತ ಸಂ|| ಮಾಘ ಬ 10 ರಲ್ಲು ಆ ದೇವರಿಗೆ ಮಾರಸಂದ್ರನ ದುರಗಗವುಡನ ಮಗ ಮಾರಗವುಡನು ಅದೇ ಗ್ರಾಮದ ಮಾರಗವುಡನ ಮಗ ದೊಡ್ಡಲಿಂಗೇಗವುಡನು ಮಡಿಹಳ್ಳಿ ಜ(ಚ) ಡೇಗಾವುಡ ಸಹ.ಶಾಸನ 130
-ಕಾಳಯುಕ್ತ ಸಂ|| ಮಾಘ ಬ 10 ರಲ್ಲು ಮಾರಸಂದ್ರದ ಮಾರಗವುಡ ಸಹ ಕಬ್ಬಾಮ್ಮನಿಗೆ ಮಾಡಿಸಿಕೊಟ್ಟ ಭಕ್ತ.ಶಾಸನ 131
ಶ್ರೀ ಯಿದ ಮಾಡಿಸಿದವರು ಕುರಬಳಿ ಕಬ್ಬಾಳುಗವುಡ || ಕೋನಾ ಮಾರನಹಳ್ಲಿ ಕಾಳಿಗವುಡ|| ಮಾಡಿದವರು ಕೆಂಡಾಚಾರಿ|| ಪುಟ್ಟಚಾರಿ||
ತಡೆ ಸೇವೆ
ಭಕ್ತಾದಿಗಳು ತಮ್ಮ ದಿನನಿತ್ಯದ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಕಬ್ಬಾಳು ಪುಣ್ಯಕ್ಷೇತ್ರದಲ್ಲಿ ತಡೆ ಸೇವೆ ಮಾಡಲಾಗುತ್ತದೆ. ಈ ಸೇವೆಯಿಂದ ದೃಷ್ಟಿ ನಿವಾರಣೆಯಾಗುವುದೆಂದು ನಂಬಿಕೆ ಇದೆ.